




Who sit around the table,
All give thanks to the Lord above
For the fact that we are able
To have the food and shelter
We all need to survive,
And have the love of family
That makes it good to be alive.
-- Karl Fuchs
ಪುಟ್ಟಿ ತಿಂದ ಹಣ್ಣುಗಳ ಟರ್ಕಿ..







Labels: art-craft, children songs, ಪುಟ್ಟಿ, ಹಬ್ಬ
ಪ್ರೀತಿಯಿಂದ ಬರೆದದ್ದು ಪುಟ್ಟಿಯ ಅಮ್ಮ 0 ಅನಿಸಿಕೆಗಳು Links to this post
ಚಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಪುಟ್ಟಿಗೆ ಹೊರಗೆ ಹೋಗಲಾಗದೆ ಮನೆಯಲ್ಲೇ ಕುಳಿತು ಬೇಜಾರಾಗುತ್ತಿದೆ. ನಿನ್ನೆ ಭಾನುವಾರ ಹೊರಗೆ ವಾತಾವರಣ ಹಾಯಾಗಿದ್ದರಿಂದ ಪುಟ್ಟಿನ ಕರ್ಕೊಂಡು ಅಲಬಾಮದಲ್ಲಿರುವ ’ಬೆಲ್ಲಿಂಗ್ರಾಥ್ ತೋಟ’ ಕ್ಕೆ ಹೋಗಿದ್ದೆವು.
ಅಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಬೆಲ್ಲಿಂಗ್ರಾಥ್ ಅವರ ಮನೆ ಅಲ್ಲಿ ಅವರು ಬಳಸುತ್ತಿದ್ದ ಸಾಮಾನು ಇವೆಲ್ಲ ನೋಡಿ ನಾವು ಬೆರಗಾದೆವು. ಇದರ ಕುರಿತು ಸದ್ಯದಲ್ಲೇ ನನ್ನ ಬ್ಲಾಗಿನಲ್ಲಿ ಬರೆಯುವೆ.


Labels: ಪುಟ್ಟಿ, ಹೂವು-ಹಣ್ಣು-ಕಾಯಿ
ಪ್ರೀತಿಯಿಂದ ಬರೆದದ್ದು ಪುಟ್ಟಿಯ ಅಮ್ಮ 0 ಅನಿಸಿಕೆಗಳು Links to this post
ಪುಟ್ಟಿಯ ನೆಚ್ಚಿನ ಫ್ರೆಂಡ್ಸ್ ಗಳಲ್ಲಿ ಅನಿಸಾ- ಸೇರಾ ಅಕ್ಕಂದಿರು ಮೊದಲಿಗರು. ಪುಟ್ಟಿ ಹುಟ್ಟಿದಾಗ ಆಸ್ಪತ್ರೆಯಲ್ಲಿ ಮೊದಲು ಭೇಟಿ ಮಾಡಿದ್ದು ಇವರನ್ನೇ. ಇವತ್ತು ಸೇರಾಳ ಹುಟ್ಟಿದಹಬ್ಬ, ಸ್ಕೇಟ್ ವರ್ಲ್ಡ್ ನಲ್ಲಿ ಹುಟ್ಟಿದಹಬ್ಬ ಆಚರಿಸಿಕೊಂಡ ಅಕ್ಕನಿಗೆ ಶುಭ ಹಾರೈಸುತ್ತಾ ಅವಳೊಂದಿಗೆ ಕಳೆದ ಕೆಲವು ಮಧುರ ಕ್ಷಣಗಳ ಮೆಲಕು...
ನಾಲ್ಕು ತಿಂಗಳ ಪುಟ್ಟಿ ಜೊತೆ ಅಕ್ಕ ಅನೀಸಾ- ತಂಗಿ ಸೇರಾ:)
ಕಳೆದ ವರ್ಷ ಹ್ಯಾಲೋವೀನ್ ದಿನದಂದು!
ಇವತ್ತು ಬರ್ತ್ ಡೇ ಪಾರ್ಟಿಯಲ್ಲಿ...
ನಾನೂ ಸ್ಕೇಟ್ ಮಾಡ್ತೀನಿ...!!
Labels: ಆಟ, ಇತರೆ ಪುಟಾಣಿ, ಪುಟ್ಟಿ, ಹುಟ್ಟಿದಹಬ್ಬ
ಪ್ರೀತಿಯಿಂದ ಬರೆದದ್ದು ಪುಟ್ಟಿಯ ಅಮ್ಮ 0 ಅನಿಸಿಕೆಗಳು Links to this post
ಕಳೆದ ವರ್ಷದಂತೆ ಈ ಬಾರಿಯೂ ಪುಟ್ಟಿ ಕನ್ನಡ ರಾಜ್ಯೋತ್ಸವವನ್ನ ಸಂತಸದಿಂದ ಬಾವುಟ ಹಿಡಿದು ಆಚರಿಸಿದಳು. ಜೊತೆಗೆ ಒಂದು ಪುಟ್ಟ ಕಾರ್ಡ್ ಮಾಡಿದ್ಲು:)
ಕನ್ನಡವೆಂದರೆ ಎಂತಹದು ಮಗು
ಕನ್ನಡವೆಂದರೆ ಎಂತಹದು ನಮ್ಮ
ಕನ್ನಡವೆಂದರೆ ಎಂತಹದು
ಕನ್ನಡವೆಂದರೆ ಎಂತಹದು
ಕೇಳುವ ಕಿವಿಗೆ ಕಿಣಿ ಕಿಣಿ ಕಿಣಿ ಗೆಜ್ಜೆ
ಕೇಳುವ ಕಿವಿಗೆ ಕಿಣಿ ಕಿಣಿ ಕಿಣಿ ಗೆಜ್ಜೆ
ಕನ್ನಡವೆಂದರೆ ಬಲು ಇಂಪು
ಕನ್ನಡವೆಂದರೆ ಬಲು ಇಂಪು
ಹೇಳುವ ನಾಲಿಗೆಗೆ ಇದು ಜೇನು
ಹೇಳುವ ನಾಲಿಗೆಗೆ ಇದು ಜೇನು
ಕನ್ನಡವೆಂದರೆ ಬಲು ತಂಪು
ಕನ್ನಡವೆಂದರೆ ಬಲು ತಂಪು
ಕನ್ನಡವೆಂದರೆ ಇಂತಹದು
ಕನ್ನಡವೆಂದರೆ ಇಂತಹುದು
ಕನ್ನಡವೆಂದರೆ ಇಂತಹದು ನಮ್ಮ
ಕನ್ನಡವೆಂದರೆ ಇಂತಹುದು ಮಗು
ಕನ್ನಡವೆಂದರೆ ಇಂತಹುದು
ಕಾಣುವ ಕಣ್ಣಿಗೆ ಮುತ್ತಿನ ಮಾಲೆ
ಕನ್ನಡ ಅಕ್ಷರ ಕಡು ಚೆಲುವು
ಕಾಣುವ ಕಣ್ಣಿಗೆ ಮುತ್ತಿನ ಮಾಲೆ
ಕನ್ನಡ ಅಕ್ಷರ ಕಡು ಚೆಲುವು
ಸಾವಿರ ಕಾಲ ಬಾಳಿದ ಕನ್ನಡ
ಸಾವಿರ ಕಾಲ ಬಾಳಿದ ಕನ್ನಡ
ಕನ್ನಡ ನಮ್ಮದಕಿದೆ ಬಲವು
ಕನ್ನಡವೆಂದರೆ ಇಂತಹದು
ಕನ್ನಡವೆಂದರೆ ಇಂತಹುದು
ಕನ್ನಡವೆಂದರೆ ಇಂತಹದು ನಮ್ಮ
ಕನ್ನಡವೆಂದರೆ ಇಂತಹುದು ಮಗು
ಕನ್ನಡವೆಂದರೆ ಇಂತಹುದು
Labels: art-craft, ಪದ್ಯ, ಪುಟ್ಟಿ, ಮಕ್ಕಳ ಪದ್ಯ
ಪ್ರೀತಿಯಿಂದ ಬರೆದದ್ದು ಪುಟ್ಟಿಯ ಅಮ್ಮ 0 ಅನಿಸಿಕೆಗಳು Links to this post
ನಮ್ಮ ಹಬ್ಬಗಳ ಜೊತೆಗೆ ಇಲ್ಲಿನ ಕೆಲವು ಆಚರಣೆಗಳನ್ನೂ ಈಗ ಪುಟ್ಟಿಗಾಗಿ ಶುರು ಮಾಡಿದ್ದೇವೆ, ಈಗಲ್ಲದಿದ್ದರೂ ಮುಂದೆ ಸ್ಕೂಲಿಗೆ ಹೋದ ಮೇಲಾದರೂ ಇವೆಲ್ಲಾ ಮಾಡಲೇಬೇಕು! ಈ ವರ್ಷ ಹ್ಯಾಲೋವೀನ್ ಗೆ ಪುಟ್ಟಿ ಹಾಕಿದ ವೇಷಗಳಿವು..
ಪುಟ್ಟ ಡೈನೋಸರಸ್..
ಮುದ್ದಾದ ಲೇಡಿ ಬಗ್:)
ಅಪ್ಪನ ಜೊತೆ ಟ್ರಿಕ್ ಆರ್ ಟ್ರೀಟ್
ವಾಹ್ ಎಷ್ಟೊಂದು ಕ್ಯಾಂಡಿಗಳು..
ಅಮ್ಮ ಅಪ್ಪನ ಜೊತೆ...
ಮಾಲಿನಲ್ಲಿ ಆಟವಾಡಿದ್ದು ಹೀಗೆ...
Labels: children songs, FancyDress, halloween, ಪುಟ್ಟಿ
ಪ್ರೀತಿಯಿಂದ ಬರೆದದ್ದು ಪುಟ್ಟಿಯ ಅಮ್ಮ 4 ಅನಿಸಿಕೆಗಳು Links to this post
ಪ್ರತಿ ವರ್ಷದ ಹಾಗೆ ಈ ವರ್ಷವೂ ಹ್ಯಾಲೋವೀನ್ ಬಂದಿದೆ. ಮೇಲ್ನೋಟಕ್ಕೆ ಇದು ಭಯ ಹುಟ್ಟಿಸುವ, ಭಯಾನಕ ಅನಿಸಿದರೂ ಇದರಲ್ಲಿಯೂ ನಮ್ಮತನ ಕಂಡಿದ್ದಾರೆ ಶ್ರೀಕಾಂತ್ ಅವರು ಇಲ್ಲಿ.


Hallowe'en is Coming Soon
(can be sung to the tune of London Bridge)
Hallowe'en is coming soon, coming soon, coming soon,
Hallowe'en is coming soon,
Oh, what fun!
Black cats sitting on a fence, on a fence, on a fence,
Black cats sitting on a fence,
Meow! Meow! Meow!
Owl's a-hooting in the trees, in the trees, in the trees,
Owl's a-hooting in the trees,
Whoo! Whoo! Whoo!
Witches flying on their brooms, on their brooms, on their brooms,
Witches flying on their brooms,
Eee! Eee! Eee!
Jack o'lanterns grin at you, grin at you, grin at you,
Jack o'lanterns grin at you,
Oh! Oh! Oh!
Hallowe'en is coming soon, coming soon, coming soon,
Hallowe'en is coming soon,
Oh, what fun!
Labels: art-craft, children songs, halloween, ಪುಟ್ಟಿ
ಪ್ರೀತಿಯಿಂದ ಬರೆದದ್ದು ಪುಟ್ಟಿಯ ಅಮ್ಮ 0 ಅನಿಸಿಕೆಗಳು Links to this post
I'm a little pumpkin

ಬಲೂನ್ ಯಿಂದ ನಾಯಿಮರಿ ಮಾಡಿಕೊಟ್ಟ ಅಂಕಲ್ ಗೆ ಥ್ಯಾಂಕ್ಸ್ ಹೇಳಿದ್ಲು...
ಕುಂಬಳಕಾಯಿ ಪೆಟ್ಟಿಯೊಳಗೆ ರಿಂಗ್ ಎಸೆಯುವಾಟ ಆಡಿದ್ಲು..
ಕುಂಬಳಕಾಯಿ ರಥದಲ್ಲಿ ನಿಂತು ಫೋಟೋ ತೆಗೆಸಿಕೊಂಡ್ಲು
ಅಲ್ಲಿದ್ದ ಮೊಲದ ಮರಿ ಮಾತಾಡಿಸಿದ್ಲು
Labels: children songs, halloween, ಪುಟ್ಟಿ, ಹೂವು-ಹಣ್ಣು-ಕಾಯಿ
ಪ್ರೀತಿಯಿಂದ ಬರೆದದ್ದು ಪುಟ್ಟಿಯ ಅಮ್ಮ 6 ಅನಿಸಿಕೆಗಳು Links to this post
ಅಮೇರಿಕಾದಲ್ಲಿ ಸಣ್ಣ ಪುಟ್ಟ ಹಣ್ಣಿನತೋಪಿನ ರೈತರು ತಾವು ಬೆಳೆದ ಹಣ್ಣುಗಳನ್ನು ’ಕೂಲಿ’ ಕೊಟ್ಟು ಕೀಳಿಸುವ ಬದಲು (ಇಲ್ಲಿ ಲೇಬರ್ ಕಾಸ್ಟ್ಲಿ ನೋಡಿ), ಅಲ್ಲಿ ಬೆಳೆಸುವ ವಿಧವಿಧದ ಹಣ್ಣುಗಳನ್ನು ಸಾರ್ವಜನಿಕರೇ ಹೋಗಿ ಕೊಯ್ದು ಬುಟ್ಟಿ ತುಂಬಿಸಿಕೊಂಡು, ಅಲ್ಲೇ ಇರುವ ‘ಚೆಕ್‌ಔಟ್ ಪಾಯಿಂಟ್’ನಲ್ಲಿ ತೂಕದ ಆಧಾರದಲ್ಲಿ ಹಣ ಪಾವತಿಸುವಂತೆ ಮಾಡಿಕೊಂಡಿದ್ದಾರೆ. ಈ ವ್ಯವಸ್ಥೆಗೆ ’Pick Your Own' ಅಂತ ಕರಿತಾರೆ. ಅಲ್ಲದೇ ಅವರ ಹಣ್ಣಿನ ತೋಟದಲ್ಲಿಯೇ ಕೆಲವರು ಮಕ್ಕಳಿಗಾಗಿ ಕುದುರೆ ಸವಾರಿ(ಪೋನಿ ರೈಡ್) ಇತ್ಯಾದಿ ವ್ಯವಸ್ಥೆಯನ್ನೂ ಮಾಡಿರುತ್ತಾರೆ. ಈರೀತಿ ತೋಟಗಳು ವಾಷಿಂಗ್ಟನ್ ಡಿಸಿ, ಕ್ಯಾಲಿಫೋರ್ನಿಯಾದಲ್ಲೆಲ್ಲ ಇವೆ. ಸ್ಟ್ರಾಬೆರ್ರಿ, ಬ್ಲೂಬೆರ್ರಿ, ರಾಸ್ಪ್‌ಬೆರ್ರಿ, ಟಾರ್ಟ್‌ಚೆರ್ರಿ, ಬ್ಲ್ಯಾಕ್‌ಬೆರ್ರಿ ಇತ್ಯಾದಿ ಬಹುತೇಕ ‘ಬೆರ್ರಿ’ ಪ್ರಭೇದದ ಹಣ್ಣುಗಳು. ಸೇಬು, ಕಿತ್ತಳೆ, ದ್ರಾಕ್ಷೆ ಇತ್ಯಾದಿ ಹಣ್ಣುಗಳು ಸಿಗುತ್ತವೆ.
ಅಂಗಡಿಗಳಲ್ಲಿ ಹಣ್ಣು ಕೊಳ್ಳುವುದಕ್ಕಿಂತ ನಾವೇ ಕೈಯಲ್ಲಿ ಬುಟ್ಟಿ ಹಿಡಿದು ಗಿಡದಿಂದ ಕೊಯ್ದು ತರುವುದೆಂದರೆ (ದುಡ್ಡು ಕೊಡಬೇಕು ಹೌದಾದರೂ) ಅದೊಂದು ಆನಂದದ ವಿಷಯವೇ. ಮೊನ್ನೆ ಒಂದು ದಿನ ಪುಟ್ಟಿಯನ್ನು ಕರಕೊಂಡು ನಾವು ಹತ್ತಿರದ ಪೆರ್ಸಿಮಾನ್ ಆರ್ಚರ್ಡ್‌ಗೆ ಹೋಗಿದ್ದೆವು. ಇದು ಆ ತೋಟಕ್ಕೆ ನಮ್ಮ ಮೊದಲ ಭೇಟಿ.
Labels: ಪುಟ್ಟಿ, ಹೂವು-ಹಣ್ಣು-ಕಾಯಿ
ಪ್ರೀತಿಯಿಂದ ಬರೆದದ್ದು ಪುಟ್ಟಿಯ ಅಮ್ಮ 4 ಅನಿಸಿಕೆಗಳು Links to this post
ಎರಡು ದಿನ ಅಪ್ಪನಿಗೆ ರಜೆಯಿದ್ದರಿಂದ ಪುಟ್ಟಿ ಈ ವರ್ಷ ದೀಪಾವಳಿಯನ್ನ ತುಂಬಾನೇ ಖುಶಿಯಾಗಿ ಆಚರಿಸಿದ್ಲು. ಅಮ್ಮಬಣ್ಣ ಬಣ್ಣದ ದೀಪಗಳನ್ನ ಮಾಡೊವಾಗ ಜೊತೆಯಲ್ಲಿ ಕುಳಿತು ತಾನೂ ’ತಪಾಚಿ(ಚಪಾತಿ)’ ’ಬಾಲ್’ ಇತ್ಯಾದಿ ಮಾಡುತ್ತಾ, ಮಾಡಿದ ಮಣ್ಣಿನುಂಡೆಯನ್ನ ಬಾಯಿಗೆ ಹಾಕಲು ಹೋಗಿ ಅಮ್ಮನಿಂದ ಬೈಯಿಸಿಕೊಂಡಿದ್ದು ಎಲ್ಲಾ ಆಯ್ತು.
Labels: Traditional Dress, ಪುಟ್ಟಿ, ಹಬ್ಬ
ಪ್ರೀತಿಯಿಂದ ಬರೆದದ್ದು ಪುಟ್ಟಿಯ ಅಮ್ಮ 2 ಅನಿಸಿಕೆಗಳು Links to this post

ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ
ದಾರದ ಜೊತೆ ಮಣಿ ಸೇರಿ ಚೆಂದದೊಂದು ಹಾರ
ತಾನಿ ತಂದಾನ ತಂದನ ತಂದಾನ ತಂದನ ತಂದಾನ ನ... ಒಂದು ಒಗಟಿನಂತೆ, ಸವಾಲ್-ಜವಾಬ್ ಎಂಬಂತಿರುವ "ಜನುಮದ ಜೋಡಿ" ಚಿತ್ರದ ಈ ಹಾಡು ನನಗಿಷ್ಟ:)
ಇಲ್ಲಿ ಈಗ ನಿಧಾನಕ್ಕೆ ಛಳಿ ಶುರುವಾಗ್ತಾಯಿದೆ. ಇನ್ನ್ಮೇಲೆ ಪುಟ್ಟಿನ ಹೊರಗೆ ಕರ್ಕೊಂಡು ಹೋಗೋದು ಕಷ್ಟ. ಮನೆಯಲ್ಲೇ ಹೊಸ ಹೊಸ ಆಟ ಆಡಿಸ್ಬೇಕು. ಜೊತೆಗೆ ಅವಳ ಕೈ ಬೆರೆಳುಗಳಿಗೆ ಒಳ್ಳೆ ಎಕ್ಸರ್ಸೈಸ್ ಕೂಡ ಆಗಬೇಕು ಅಂತ ಮೊನ್ನೆ ಅವಳಿಗೆ ಒಂದು ಶೂ ಲೇಸ್ ಕೊಟ್ಟು, ಕೆಲವು ಮಣಿಗಳನ್ನ ಬಟ್ಟಲಿನಲ್ಲಿ ಹಾಕಿಕೊಟ್ಟೆ. ಒಂದೇ ಒಂದು ಸರ್ತಿ ನಾನು ಪೋಣಿಸಿ ತೋರಿಸಿದೆ ಅಷ್ಟೆ. ಈಗ ಇದು ದಿನ ನಿತ್ಯದ ಆಟ. ದಿನಕ್ಕೆ ಒಂದೆರಡು ಸರ್ತಿಯಾದ್ರೂ ಮಣಿಗಳನ್ನ ಪೋಣಿಸಿ ’ಸರ’ ’ಸರ’ ಅಂತ ತನ್ನ ಕೊರಳಿಗೆ ಸುತ್ತಿಕೊಳ್ತಾಳೆ.:)
ನೀವು ನಂಬಿದ್ರೆ ನಂಬಿ ಇದು ಅವಳಿಗೆ ನಾನು ಮಣಿ ಕೊಟ್ಟ ಮೊದಲ ದಿನ ತೆಗೆದ ವಿಡಿಯೋ!
ಅಂದ ಹಾಗೆ ಮಕ್ಕಳು ಮಣಿಯನ್ನ ಬಾಯಿಗೆ ಹಾಕೋತಾರೆ ಅನ್ನುವ ಭಯವಿದ್ದರೆ ಮಕ್ಕಳು ತಿನ್ನುವ ’ಫ್ರೂಟ್ ಲೂಪ್ಸ್’ ಪೋಣಿಸಲು ಕೊಡಿ!!
ಪ್ರೀತಿಯಿಂದ ಬರೆದದ್ದು ಪುಟ್ಟಿಯ ಅಮ್ಮ 8 ಅನಿಸಿಕೆಗಳು Links to this post